6 hours 43 minutes
Some articles contain affiliate links (marked with an asterisk *). If you click on these links and purchase products, we will receive a small commission at no extra cost to you. Your support helps to keep this site running and to continue creating useful content. Thank you for your support!
ವೈದೇಹಿಯವರ ಕಥೆ- 'ಅಮ್ಮಚ್ಚಿಯೆಂಬ ನೆನಪು'- ಒಬ್ಬ ತಂದೆಯಿಲ್ಲದ ಎಳೆಯ ಹುಡುಗಿ ಅಮ್ಮಚ್ಚಿಯ ಕುರಿತದ್ದು. ಆಕೆ ಬಂಡಾಯದ ಅರಿವನ್ನು ಒಳಗಿಟ್ಟುಕೊಂಡಿರುವವಳು; ಗಟ್ಟಿಯಾದ ವೈಯಕ್ತಿಕತೆಯಿರುವವಳು. ವೆಂಕಪ್ಪಯ್ಯನಿಂದ ಅತ್ಯಾಚಾರಕ್ಕೂ ದಮನಕ್ಕೂ ಒಳಗಾಗಿ ಆಕೆ ಆತನನ್ನು ಒತ್ತಾಯದಿಂದ ಮದುವೆಯಾಗಿದ್ದಾಳೆ. ಅಮ್ಮಚ್ಚಿಗಿಂತ ಕಿರಿಯಳಾದ ಮತ್ತು ಆಕೆಯ ಅಂತಃಶಕ್ತಿಯನ್ನು ಮೆಚ್ಚುವ ಆಕೆಯ ಗೆಳತಿ ಇಲ್ಲಿ ಈ ಕಥೆಯನ್ನು ವಸ್ತುನಿಷ್ಠವಾಗಿ ಹೇಳತೊಡಗಿದ್ದಾಳೆ. ಈ ಕಥೆಯಲ್ಲಿ ಪ್ರೌಢವಾದೊಂದು ಕಾಲ್ಪನಿಕತೆಯಿದೆ. ಗಟ್ಟಿಯಾದ ಹಾಸ್ಯಪ್ರಜ್ಞೆ ಉದ್ದಕ್ಕೂ ಕೆಲಸ ಮಾಡಿದೆ. ಸ್ತ್ರೀವಾದೀ ಧೋರಣೆ ಎಂಬುದು ಇಲ್ಲಿ ಕಥನದ ನೇಯ್ಗೆಯಲ್ಲಿ ಮತ್ತು ಕೇಂದ್ರ ಪಾತ್ರದ ನಿರೂಪಣೆಯಲ್ಲೇ ಅಂತರ್ಗತವಾಗಿದ್ದು ಎಲ್ಲೂ ಅದು ಬುದ್ಧಿಪೂರ್ವಕವಾಗಿ ಮೇಲಿನಿಂದ ಸೇರಿಸಿದಂತೆ ಅನಿಸುವುದಿಲ್ಲ. - ಶಾಂತಿನಾಥ ದೇಸಾಯಿ A collection of short stories by Vaidehi, including one of her most celebrated 'Ammachi Yemba Nenapu'.