4 hours 2 minutes
Some articles contain affiliate links (marked with an asterisk *). If you click on these links and purchase products, we will receive a small commission at no extra cost to you. Your support helps to keep this site running and to continue creating useful content. Thank you for your support!
'ಹಲವು ವರ್ಷಗಳಲ್ಲಿ ಬರೆದ ಈ ಹದಿನಾಲ್ಕು ಕಥೆಗಳು, ಅತ್ಯಂತ ಪ್ರಾಮಾಣಿಕವಾದ ಅನಾತುರದ ದೃಢ ಹೆಜ್ಜೆಗಳಲ್ಲಿ ಲೇಖಕಿ ಬಹು ಸಹಜವಾಗಿ ಬೆಳೆಯುತ್ತ ಬಂದುದನ್ನುಸ್ಫುಟವಾಗಿ ಮನಗಾಣಿಸಿಕೊಡುತ್ತವೆ. ಅನುಭವಗಳನ್ನು ಕಥಾರೂಪದಲ್ಲಿ ಹರಳುಗಟ್ಟಿಸಿಕೊಳ್ಳುವ ಪ್ರಯತ್ನದ ಜತೆಜತೆಗೇ, ಕಥೆಕಟ್ಟುವ ಚಾತುರ್ಯಕ್ಕೇ ಬಲಿಗೊಟ್ಟು ಕೊಳ್ಳದೆ, ಕಥೆಯ ಸೆರೆಯಿಂದ ಬಿಡಿಸಿಕೊಳ್ಳಲೂ ಹವಣೆಸುವಂಥ ಬಿಗುಪಿನ ಹದ; ತನ್ನದೇ ಸಾಚಾ ಅನುಭವಗಳನ್ನು, ಇವು ಕ್ಷುಲ್ಲಕವೆನಿಸಿಯಾವೋ ಎಂಬ ಸಂದೇಹ ಸಂಕೋಚಗಳಿಂದ ಬಾಧಿತವಾಗದೆ, ನಿಷ್ಠೆಯಿಂದ ಆಧರಿಸುವ ಹಾಗೂ ಈ ಸ್ವಂತಿಕೆಯ ಮಿತಿಯಲ್ಲೇ ತನ್ನತನವನ್ನು ಮೀರಿಕೊಳ್ಳಲು ಪ್ರಯತ್ನಿಸುವ ಸೃಜನಪ್ರಜ್ಞೆ - ಮುಂತಾಗಿ ಹಲವು ಅಪರೂಪದ ಗುಣಗಳ ಬೆಳೆವಣಿಗೆಯನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿನ ಕಥೆಗಳ ಮಂದ್ರಶ್ರುತಿಯ ಸೊಬಗು ಗದ್ದಲವಿಲ್ಲದೆ ಸೆಳೆಯುವಂಥದು.' - ಕೆ ವಿ ಸುಬ್ಬಣ್ಣ A short story collection of stories written across years by Vaidehi